ಮತ್ತೊಂದ್ ಮದುವೇನಾ 2011 ರ ಹಾಸ್ಯ ಪ್ರಕಾರದ ಕನ್ನಡ ಚಲನಚಿತ್ರವಾಗಿದ್ದು, ಅನಂತ್ ನಾಗ್, ಸುಹಾಸಿನಿ ಮಣಿರತ್ನಂ ಮತ್ತು ನವೀನ್ ಕೃಷ್ಣ ಅವರುಗಳು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು 2010 ರ ಹಿಟ್ ಚಿತ್ರ ಎರಡನೆ ಮದುವೆಯ ಮುಂದುವರಿದ ಭಾಗವಾಗಿದೆ. ಚಿತ್ರವನ್ನು ದಿನೇಶ್ ಬಾಬೂ ನಿರ್ದೇಶಿಸಿದ್ದಾರೆ ಮತ್ತು ಬರೆದಿದ್ದಾರೆ ಮತ್ತು ಉಮೇಶ್ ಬಣಕಾರ ಮತ್ತು ಅನಿಲ್ ಮೆಣಸಿನಕಾಯಿ ನಿರ್ಮಿಸಿದ್ದಾರೆ. ಗಿರಿಧರ್ ಸಂಗೀತ ಸಂಯೋಜನೆ ಮಾಡಿದ್ದಾರೆ. == ಪಾತ್ರವರ್ಗ == ಅನಂತ್ ನಾಗ್ ಸುಹಾಸಿನಿ ಮಣಿರತ್ನಂ ಜೆನ್ನಿಫರ್ ಕೊತ್ವಾಲ್ ತಾರಾ ನವೀನ್ ಕೃಷ್ಣ ಎಂ ಎಸ್ ಉಮೇಶ್ ಪ್ರಿಯಾಂಕಾ ಶರಣ್ ರಾಜು ತಾಳಿಕೋಟೆ ವೀಣಾ ಸುಂದರ್ == ಉಲ್ಲೇಖಗಳು ==